” ನೀ ಸುಂದರ ಪ್ರವಾಸಿ ”

ಈ ಜನುಮವು ಸಿಕ್ಕ ನೀ
ಯಾವ ಊರ ಪಯಣಿಗನೂ
ಈ ತನುವ ಪ್ರಣಯದಲಿ ನಕ್ಕ ನೀ
ನವಿಲೂರ ಹುಡುಗನೇನೋ

ಕಂಡ ಕ್ಷಣದೊಳಗೆ ನೀ
ಮನಸೆಲ್ಲಾ ಜಿನುಗಿದ ಮಳೆ
ಚಂದದ ಕಣ್ಣೊಳಗೆ ನೀ
ಕನಸೆಲ್ಲಾ ಜಗುಗಿಸಿದ ಸೆಲೆ

ಗಡಿಯಾರ ಕೂಡಿ ಇಟ್ಟಿರುವ
ಮುಳ್ಳೆರಡು ನಾನು-ನೀನು
ನೀ ಮುಂದೆ ಹೋದರು ,ಹಿಂದೆ ಹೋದರು
ನಾ ಮತ್ತೆ ಮತ್ತೆ ಸಿಗುವೆನು , ನಗುವೆನು

ತುಂತುರು ನೆನಪಿನೊಳಗೆ
ನೀ ಸುಂದರ ಪ್ರವಾಸಿ
ಮಂಪರು ಹೃದಯದೊಳಗೆ
ನೀನೆ ಅತಿಶಯದ ಹೆಸರುವಾಸಿ

ಬೇಸರಿಕೆ ಓಡಲು ದಿನವೆಲ್ಲಾ
ನೀನೊಬ್ಬನೆ ಕಾರಣ
ಲವಲವಿಕೆ ಇಂದಿರಲು ಮನವೆಲ್ಲಾ
ನೀನಿಂದಲೇ ಹಸಿರುತೊರಣ

– ಕವಿ ಹೃದಯ

Advertisements
Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

“ಹೃದಯ ಚಿತ್ತಾಗಿದೆ…..”

ನಯವಾದ ನೊರೆ ಹಾಲಿನ ಒಲವಿದು
ಕೆನೆ ಹರಿದರೂ ಎಂದಿಗೂ ಒಡೇಯದು
ಪ್ರತಿ ಘಳೀಗೆ ನಿನ್ನ ನೆನಪ ಬೆಂಗಾವಲು
ಮರು ಮಾತಿಲ್ಲದೆ ನಿನಗೆ ನಾ ಸೊಲಲು
ನಿನ್ನ ಕಾಲ್ಗೆಜ್ಜೆ ದನಿಕೊಡಾ ಇಂಪಾಗಿದೆ
ನಿನ್ನ ಕಾಣಾದೆ ಮನಸು ಮಂಕಾಗಿದೆ

ಪ್ರತಿ ಇರುಳು ಹೊ ಕನಸ ಸವಿ ಮಂಪರು
ಮರೆ ಮಾಚದೆ ಎದುರು ನೀ ಬರುತಿರು
ತೆರೆ ತೆರೆದಿರುವೆ ನನ್ನೆದೆಯೆ ಮುಂಬಾಗಿಲು
ನೀ ಅಡೀಯೀಟ್ಟೂ ಬಂದೊಡನೆ ನಾ ಕಾವಲು
ತಿಳೀ ಎದೆಗೊಳದಿ ಈ ಪ್ರೀತಿ ಮುತ್ತಾಗಿದೆ
ನೀ ನಡೇಯಲು ಹೃದಯ ಚಿತ್ತಾಗಿದೆ ………

– ಕವಿ ಹೃದಯ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

“ನಾ ಅಲೆಮಾರಿ………………”

  ಪ್ರೀತಿ ಹಳೆಯ ಸರಕು ಇಲ್ಲೊಂದು ಹೊಸ ಅದ್ಯಾಯ
  ಏಳೋ ಸಣ್ಣಾ ಬಿರುಕು ಬದುಕೆ ಇಲ್ಲಿ ಸಂದಾಯ
  ಪ್ರೀತಿ ಹಬೆ ಆರುವ ಮುನ್ನಾ
  ಬೇಗನೆ ಒಪ್ಪಿಕೋ ನನ್ನಾ
  ಕಣ್ಣಿಂದಾ ಉದುರುವ ಹನಿಯು
  ಲಾವರಸದಂತೆ ಬಿಸಿಯು

  ಕಾತರಿಸುತಿದೆ ಮನ ಒಮ್ಮೆಯದರು
  ಇಣುಕಿ ಹೋಗು
  ಹಟ ಹಿಡಿದಿದೆ ದಿನ ಸುಮ್ಮನೆಯಾದರು
  ಕೆಣಕಿ ಹೋಗು
  ಮುಳುಗುತಿದೆ ಕನಸ ಹಾಯೀ ದೋಣಿ
  ವದೆಯದಿರು ಮನದ ಪ್ರೀತಿ ಏಣಿ

  ನೀ ನಡೆದ ದಿಕ್ಕಿನಲಿ
  ಅನುಸರಿಸೋ ನಾ ಅಲೆಮಾರಿ
  ನೀ ಕೈ ಹಿಡಿದ ಹೊತ್ತಿನಲಿ
  ನೊರಾರು ಕವಲು ದಾರಿ
  ಪ್ರೀತಿಯಲಿ ಎಂಥದ್ದೆ ಮುನಿಸು
  ವಿರಹಕ್ಕು ಬೇಗ ರಜೆ ತಿಳಿಸು

  -ಕವಿ ಹೃದಯ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

” ಈ ಶೀತಲ ಅನುಭವ “

ನಿನ್ನೊಲವ ಸುಧೆಯೂ ಎದೆಯೊಳಗೆ
ನಿನ್ನದೊಂದೆ ರೂಪ ಕಣ್ಣೊಳಗೆ
ನಿನ್ನಾ ಸಾಂಗತ್ಯವು , ಒಂದು ಹೊಸ ಸಾಹಿತ್ಯವು
ನಿನ್ನಾ ಆಗಲಿಕೆಯೂ , ಒಂಥರ ಬಿಭತ್ಸ್ಯವು

ಬದಲಾದ ಹಾಗಿದೆ ಈ ಸ್ನೇಹದ ಗರುತು
ನವಿರಾಗಿ ಮೂಡಿದೆ ಹೊಸ ಪ್ರೇಮದ ಗುರುತು
ಹುಸಿಮುನಿಸ ಸಹಿಸುವ ನಿನ್ನೊಲವ ಸಂಯಮ
ಹೊಸ ಕನಸ ಹೊಸೆಯುವ, ಮುಂದೆಲ್ಲಾ ಸಂಭ್ರಮ

ನಿನ್ನೆ ನಿನ್ನೊಡನೆ ಕಳೆದ ನೆನಪು
ಬರುವ ನಾಳೆಯ ಕಾಯುವ ಹುರುಪು
ಬದುಕಿಸಿದೆ ಈ ಪ್ರಾಣವ
ನಿನ್ನೂಬ್ಬಳಿಂದಾ ಮಾತ್ರ ನೀಡಲು ಸಾದ್ಯ
ಈ ಶೀತಲ ಅನುಭವ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

  “ಅಳಿಂದಾ ನಾ , ಶ್ರಿಮಂತ”

ದೊರದಲ್ಲೆಲ್ಲೊ ನಿನ್ನದೆ ದನಿಯೂ
ನೀನು ನನ್ನನೆ ಹುಡುಕುವ ಹಾಗೇ
ಅಂಗೈಯಲ್ಲಿ ನನ್ನದೆ ಕಂಬನಿಯೂ
ನಾನು ನಿನ್ನನೆ ಹುಡುಕುವ ಹಾಗೇ
ಆಲಿಸುವ ದನಿಯು , ಮೌನ ವಹಿಸಿದೆ
ಧ್ಯಾನಿಸುವ ಮನವೂ ಶೂನ್ಯವಾಗಿದೆ

ತೇಲಿಸುವಳು ನನ್ನಾ ಪ್ರಣಯಾಗ್ನಿ
ಇರುಳೆಲ್ಲಾ ಕನವರಿಕೆಯಲಿ
ಹಗಲೆಲ್ಲಾ ಕನಸಿನಲ್ಲಿ
ಅವಳೇ ಕವಿತೆ ನಿಗಿ ನಿಗಿ
ಹಣತೆ ನನ್ನೊಡಲಿಗೆ
ಅವಳೆ ವಸಂತ , ಅಳಿಂದಾ
ನಾ ಶ್ರಿಮಂತ ನನ್ನೊರಿಗೆ

ಈ ಮಡಿಲಲ್ಲಿ ಅವಳಿಗಲ್ಲದೆ
ಮತ್ತಾರಿಗೆ ನೇವರಿಕೆ
ಕುಡಿದರು ಮತ್ತೆ ಮತ್ತೆ ಬೇಕೆನ್ನೂವ
ಒಲವ ಬಾಯರಿಕೆ
ನದಿಗಳಿಗಿಂತಾ ಹಳೆಯ ಸೆಳೆತ
ನೀ ಹೊಸದಾಗಿ ಸಿಕ್ಕಿರುವೆ
ಉಕ್ಕಿದೆ ಮೊರೆತ , ಹಳೆಯ
ಪ್ರೇಮವ ಹೆಕ್ಕಿ ತಂದಿರುವೆ

– ಕವಿಹೃದಯ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

” ಬಡವನೆಂದರೇನು ಲೋಕ “

ಅಂಗಳದಿ ಕೂರಿಸಿ ಕೈತುತ್ತು ತಿನ್ನಿಸುವೆನು
ಬಡವನೆಂದರೇನು ಲೋಕ
ಕಣ್ಣ್ ಮುಂದೆ ಕಡಲು , ಬೆಚ್ಚನೆಯ ಮಡಿಲು
ಇನ್ನೆನೂ ಬೇಕಾ , ಮಾತೆಲ್ಲವೂ ಮೂಕ

ನೀ ಬುಜದ ಮೇಲೆ ಒರಗಿದ ಗುರುತು
ಇನ್ನೂ ಹಾಗೇ ಉಳಿದಿದೆ
ನೀ ಎದ್ದು ಹೋದ ನಂತರವು
ತನುವೆಲ್ಲಾ ನೀನ್ನೆಡೆಗೆ ಸೆಳೆದಿದೆ
ನೀ ಇಲ್ಲದ ಖಾಲಿ ಜಾಗವ
ತುಂಬುವುದ ಕಲಿಸೆ
ನನ್ನನು ಕೇಳದೆ ಹೊರಟಿದೆ
ಮನಸು ನೀನೆಡೆಗೆ ವಲಸೆ

ಬಡವನ ಮನೆಗೆ ಅಂದು
ನೀ ಸಡಗರದಂತೆ ಬಂದು ನಿಂತೆ
ಬರಿದಾಗಿದೆ ಮನಸಿಂದು
ಬೇಡವಾಗಿದೆ ನೀ ಇಲ್ಲದಿರೊ ಸಂತೆ
ನಿನ್ನಾ ನೆನೆದು ಕಂಬನಿಯು
ಮೆಲ್ಲ ಮೆಲ್ಲನೆ ಚಿಮುಕಿಸಿದೆ
ಕೆನ್ನೆ ಮೇಲಿನ ಸಣ್ಣ ಹನಿಯು
ನನ್ನಾ ಕಂಡು ಕೆಣಕುತಿದೆ

– ಕವಿ ಹೃದಯ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ