ಗಡಿಯಾರದಲ್ಲಿ ಕೂಡಿಟ್ಟಿರೋ

ಈ ಜನುಮ ಪಯಣದಲಿ ಸಿಕ್ಕ ನೀ
ಯಾವೂರ ಪಯಣಿಗನೂ
ಈ ತನುವ ಪ್ರಣಯದಲಿ ನಕ್ಕ ನೀ
ನವಿಲೂರ ಹುಡುಗನೇನೋ ……

ಕಂಡ ಕ್ಷಣದೊಳಗೆ ನೀ
ಮನಸೆಲ್ಲಾ ಜಿನುಗಿದ ಮಳೆ
ಚೆಂದದ ಕಣ್ಣೊಳಗೆ ನೀ
ಕನಸೆಲ್ಲಾ ಜರುಗಿದ ಸೆಲೆ……

ಗಡಿಯಾರದಲ್ಲಿ ಕೂಡಿಟ್ಟಿರೋ
ಮುಳ್ಳೆರೆಡೂ ನಾನು ನೀನು
ನೀ ಮುಂದ್ಹೋದರೂ ಹಿಂದ್ಹೋದರೂ
ನಿಮಿಷಕೊಮ್ಮೆ ಸಿಗುವೆನು……

ಬೇಸರಿಕೆ ಓಡಲು ದಿನವೆಲ್ಲಾ
ನೀನೊಬ್ಬನೇ ಕಾರಣ
ಲವಲವಿಕೆ ಮನವೆಲ್ಲಾ
ನಿನ್ನಿಂದಲೇ ಈ ತಲ್ಲಣ……

ತುಂತುರು ನೆನಪಿನಲಿ
ನೀ ಅತಿಥಿ , ಓ ಪ್ರವಾಸಿ
ಮಂಪರು ಹೃದಯದಲಿ
ನೀನೇ ಅತಿ ಹೆಸರುವಾಸಿ…..

Advertisements
Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

” ನಾ ಬರಿ ಪ್ರೇಕ್ಷಕ …………..”

ಎಲ್ಲಾ ಮರೆತು ಹಗುರಾಗುವಾಗ
ಸುಳಿದಂತಾಗಿ ನವಿರಾದರಾಗ
ಗಾಯದ ಗುರುತುಗಳ ಅಳಿಸಿ
ಮಂಪರಿನ ಮೋಹ ಆವರಿಸಿ
ಬದುಕಿನ ಗತಿಯೇ ಅದಲು-ಬದಲು
ನೆರಳಿನಂತೆ ನೀನು ಬರಲು

ಕುಡಿಗಣ್ಣಾ ಪ್ರತಿ ಮೋಹವೂ
ಕಿರುಗಣ್ಣಾಲೇ ದಾಖಲಾಯಿತು
ಸೇರಿಸಿಟ್ಟಾ ಪ್ರತಿ ಆಸೆಯೂ
ನಿನಗಾಗಿಯೇ ಮೀಸಲಾಯಿತು
ಮತ್ತೆ ಮತ್ತೆ ನಿನ್ನನೆ
ನೋಡುವ ವ್ಯಾಮೋಹ
ಸದ್ದಿಲ್ಲದೆ ನಡೆದಿದೆ
ಕಣ್ಣು ಕಣ್ಣುಗಳ ವಿವಾಹ

ಸುಮ್ಮನಿರಲು ನಾನು ಅತಿಯಾಯಿತು
ನಿನ್ನಾ ಹಾವಳಿ
ನಗುತಿರಲು ನೀನು ಋತುಗಳು
ಹೋಡಿದೆ ಚಳುವಳಿ
ಮಾತುಗಳೆಲ್ಲಾ ನಿನ್ನದೆ
ನಾ ಬರಿ ವಾಚಕ
ಸರಿಯುವ ಚಿತ್ರವೂ ನಿನ್ನದೆ
ನಾ ಬರಿ ಪ್ರೇಕ್ಷಕ ……..

– ಕವಿ ಹೃದಯ

Posted in Uncategorized | 4 ಟಿಪ್ಪಣಿಗಳು

“ನೀ ಬಾಳ ಕಂಗೆಡಿಸಿದೆ”

ನಿನ್ನಾ ಚಲುವು ಈ ಕಣ್ಣಾ ಆವರಿಸಿದೆ
ನಿನ್ನಾ ಒಲವು ನನ್ನಾ ಕನಸ ವಿಂಗಡಿಸಿದೆ
ಪ್ರತಿ ಸಲವೂ ನೀ ಬಾಳ ಕಂಗೆಡಿಸಿದೆ
ಒಂದೇ ಸಮನೇ ಮನಸು ಚಡಪಡಿಸಿದೆ
ಸುಮ್ಮ ಸುಮ್ಮನೆ ಕನವರಿಸಿದೆ

ಸನಿಹವೆ ಸುಳಿದು ನೀ ಹಾಗೆ ಸವರಿದಂತಿದೆ
ಇರುವಿಕೆಯ ಸವಿದು ಅಂಗೈ ಸಣ್ಣಗೆ ಬೆವರಿದಂತಿದೆ
ನೀ ಇರುವ ಜಾಗವ ತಿಳಿಸು
ಎದೆಯೂಳಗಿನ ವೇಗವ ಇಳಿಸು
ತಿಳಿಯಾದ ಬದುಕು ಕದಡಿಹೋಗಿದೆ

ಮೈ ಮರೆತು ಕುಳಿತಿರಲು ನೀ ಹಾಗೆ ತಿವಿದಂತಿದೆ
ತಿರುಗಿ ಹುಡುಕಲು ನಾ
ನೀ ಮೋಡದೊಳಗೆ ಸರಿದಂತಿದೆ
ನೀ ಬರುವ ಸೂಚನೆ ತಿಳಿಸು
ಕಾಯುವ ಈ ಯಾತನೆ ಆಳಿಸು
ಮೊಗ್ಗಾದ ವಯಸು ಅರಳಿದೆ

-ಕವಿ ಹೃದಯ

Posted in Uncategorized | 2 ಟಿಪ್ಪಣಿಗಳು

“ನೀ ಎದುರು ಇಲ್ಲದೆ”

ಪ್ರೀತಿಸೋ ಈ ಪುಟ್ಟ ಹೃದಯಕೆ
ನಿನ್ನಾ ವಿನಹ ಒಮ್ಮೆ ಬಡಿದು ಬದುಕಲಾರದು
ಈ ಜೀವ ಸಲ್ಲದು

ಕಂಗಳು ನಿನ್ನನ್ನು ಕಾಣದೆ
ನಿನ್ನನ್ನು ಕಾಣದೆ
ನಿನ್ನಾ ಸನಿಹ ಇರದ ಹೊರತು
ರೆಪ್ಪೆ ತೆರೆಯದು , ರೆಪ್ಪೆ ತೆರೆಯದು
ನೀ ಎದುರು ಇಲ್ಲದೆ

ಹಾರಾಡೋ ದುಂಬಿಗೆ ಹೊವೆಲ್ಲಾ ಅವಿತರೆ
ಆ ದುಂಬಿಯ ಪಾಡೆಲ್ಲವೂ ನನ್ನಂತೆಯೆ
ಸುಳಿದಾಡಿ ನೆನಪಲಿ , ಏಕಾಂತ ಮನಸಲಿ
ಸಾಕಾಗಿದೆ , ಬೇಕಾಗಿದೆ ನೀ ಎನ್ನಲಿ
ಮಾತುಗಳೆಲ್ಲಾ ಮಾಸಿವೆಯಲ್ಲಾ , ತಿದ್ದಲು ಬಾರೆ……..

ಈ ಮೌನದಡಚಣೆ ನೀ ಬೇಗ ದಾಟಿ ಬಾ
ಮಾತಾಡಲು , ನೀ ಸೇರಲು , ಒಂದಾಗಲು
ಅನಾಥವಗಿದೆ ಈ ಎದೆಯ ಪ್ರೀತಿಯೂ
ದಿಕ್ಕಿಲ್ಲದೆ ದೊರಾಗಿದೆ ನೀ ಬಾರೆಯ
ಕನಸಿನ ಬಣ್ಣ ಕರಗುವು ಮುನ್ನಾ
ನೀ ಬೇಗ ಬಾರೆ…………

-ಕವಿ ಹೃದಯ

Posted in Uncategorized | 2 ಟಿಪ್ಪಣಿಗಳು

“ಉಸಿರಲೇ ಸೋಕಿ”

ಬೆಳದಿಂಗಳ ಬೆಳಕನ್ನು ಚಲ್ಲೊ ನಲ್ಲೆ
ಕಣ್ಣಂಚಿನ ನಗುವಲ್ಲೆ ಬರೆದೆ ಓಲೆ
ನಿನ್ನದೆ ಜಪವಮ್ಮ ನಿನ್ನದೆ ತಪವಮ್ಮ
ಉಸಿರಲೇ ಸೋಕಿ , ಕಲೆಹಾಕಿ ಬಾ ಪ್ರೀತಿಸು

ಉಸಿರನೇ ಬಿಗಿಹಿಡಿದು , ಬಡಿತವ ನಾ ತಡೆದು
ಇವಳಿಗೆ ನಾ ಕಾಯಲೇ
ನೋಡಿದ ಕ್ಷಣದೊಳಗೆ, ಪ್ರೀತಿಯ ಬಲೆಯೊಳಗೆ
ಸೆಳೆಯೋ ಶಾಕುಂತಲೇ
ಶಿಲೆಗಳೇ ಬೆರಗಾದವು , ಅಲೆಗಳೇ ಮರುಳಾದವು
ನನ್ನೊಳ ಈ ನಗುವಿಗೆ ಋತುಗಳೇ ಮೈನೆರೆದವು
ಪ್ರೀತಿಯ ನೆರಳಲ್ಲೆ ಜೂ…….. ಟಾಟವೇ

ಸುಮ ಸುಮ ಹೊವಿನೊಳು
ಘಮ ಘಮ ನನ್ನವಳು
ದುಂಬಿಯೂ ನಾನಾಗಲೇ
ಸರಿಗಮ ಸ್ವರದೊಳಗು ಇವಳದೆ ಮುಗುಳು ನಗು
ಹಾಡೇಲೇ ಕೋಗಿಲೆ
ವಯಸಿದು ನಿಂತಾಯಿತು , ಮನಸಿದು ವಶವಾಯಿತು
ನನ್ನೂಳ ಮಾತೇಲ್ಲಾವು ಸ್ವತಿಯ ಮುತ್ತಾಯಿತು
ಈ ತುಡಿತಾ, ಮಿಡಿತಾ ನಿನಗಾಗಿಯೆ

– ಕವಿ ಹೃದಯ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

” ಸಿಹಿ ನೋವು……. ”

ಸಿಹಿ ನೋವು ಸವಿಯಾಗಿ ಪಸರಿಸಿದೆ
ನಿನ್ನೊಲವು ನನ್ನೊಲವ ವರಿಸುತಿದೆ
ಮೌನವೇ ಇಂದಿನಾ ಮುಖ್ಯಾಂಶವೆ
ಪ್ರೇಮವೇ ಇದರ ಸಾರಾಂಶವೆ

ನನ್ನಲಿ ನಾ ಇರದಂತೆ
ಮಳೆಯಲು ಮೈ ಸುಡುವಂತೆ
ಕಿವಿಯಲಿ ನಿನ್ನದೆ ಕೋಳಲು

ಕನಸಲು ನೀ ಕರೆದಂತೆ
ಹಿಡಿಯಲು ನೀ ಹೊಳೆಯಂತೆ
ಎದೆಯಲೆ ಕಟ್ಟುವೇ ಮಹಲು

ನೀ ಎದುರು ಬಂದಾಗಲೆ
ತನುವೆಲ್ಲಾ ನವಿಲಂತೆ
ನಿನ್ನಾ ರೂಪವೂ ಸುಳಿದಾಕ್ಷಣ
ಹೃದಯವೂ ಅತಿಯಾಗಿ ಬಡಿದಂತೆ

ಒಂಟಿ ಭಾವ ಸುಳಿದಾಗ
ನೀನೆ ನೆನಪಾದಂತೆ
ನೆನೆಯುತಾ ಅಲೆದಾಡಲು
ನೀನೆ ಕೈ ಬಿಗಿ ಹಿಡಿದಂತೆ

-ಕವಿ ಹೃದಯ

Posted in Uncategorized | 1 ಟಿಪ್ಪಣಿ

” ಮಧುರವಾಗಿದೆ ಈ ಸಂಜೆ ”

ಮಧುರವಾಗಿದೆ ಈ ಸಂಜೆ
ಆದರು ಬೆಂಬಿಡದ ಮೌನ
ನಿನ್ನದೆ ನೆನಪಿನಲಿ ಮಿಂದೆನು
ಕನಸುಗಳ ಮಾಘಸ್ನಾನ
ಹೊಗಳಿಕೆಯ ಕೇಳಿ ಚಂದಿರನು
ತುಸು ನಾಚಿದ
ಈ ಸಲುಗೆಯ ಕಂಡು
ಮೋಡದೊಳಗೆ ಮರೆಮಾಚಿದ

ಕೊಡಿಕೊಟ್ಟಾ ಮುತ್ತನು
ಮಾಡಬಾರದೆಕೆ ಮರುಪಾವತಿ
ಕಣ್ಣ್ ಮುಚ್ಚಿ ಎಣಿಸಿ ನಾ ನೀಡುವೆ
ಒಂದೊಂದಕ್ಕು ರಸಿತಿ
ನಕ್ಷತ್ರ ಸರಿದಾಡಿದೆ ಈ ಕಣ್ಣಲಿ ಸೇರಿದೆ
ನನ್ನಾ ಕಂಡು ಕಣ್ಣಿಂದಾ ಮಿಂಚಲ್ಲಾವು ಜಾರಿದೆ

ಹೇಗೆ ತೂಗಿದರು ಹೇಗೆ ಬಾಗಿದರು
ಅರಿಯಲಿಲ್ಲಾ ನಿನ್ನಿ ಗುಣಾಕಾರ
ಸೆರೆಯಾದ ಮೇಲೆ ಇನ್ನೆತಕೆ
ಕೊಡಿಕಳೆವ ಲೆಕ್ಕಾಚಾರ
ಮೈಚಾಚಿ ಮಲಗುವ ಏಕಾಂತ ಇನ್ನಿಲ್ಲವೆ
ಕೈಚಾಚಿ ಕರೆದಿರುವ ಒಲವಲ್ಲಿ ನಾವಿಲ್ಲವೆ

– ಕವಿ ಹೃದಯ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ